Share
Sign In
ಮಾಗಡಿ
ಮಾಗಡಿ ಪುರಸಭೆ ಕಾಂಗ್ರೆಸ್ ಪಾಲು
S
Silk_City
👍
ಸ್ಪಷ್ಟ ಬಹುಮತ ಹೊಂದಿದ್ದ ಜೆಡಿಎಸ್‌ ಪಕ್ಷ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು ಕಾಂಗ್ರೆಸ್‌ ಪಕ್ಷ ಹಣೆದ ತಂತ್ರದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಹಿಡಿಯುವಲ್ಲಿ ಸಫಲವಾಯಿತು.
ಪುರಸಭೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ 22ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ರಮ್ಯಾ ನರಸಿಂಹಮೂರ್ತಿ, ಉಪಾಧ್ಯಕ್ಷರಾಗಿ 14ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ರಿಯಾಜ್ ಅಹಮದ್‌ ತಲಾ 11 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್‌ ಶರತ್ ಕುಮಾರ್‌ ಘೋಷಿಸಿದರು.
ಒಟ್ಟು 23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್‌ 12 ಸದಸ್ಯರು, ಕಾಂಗ್ರೆಸ್ 10 ಸದಸ್ಯರು, ಬಿಜೆಪಿ ಓರ್ವ ಸದಸ್ಯೆಯನ್ನು ಒಳಗೊಂಡಿದೆ. ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯ ಓರ್ವ ಸದಸ್ಯ ಬೆಂಬಲದಿಂದ 13 ಸ್ಥಾನ ಮತ್ತು ಸಂಸದ ಡಾ.ಮಂಜುನಾಥ್ ಅವರ ಮತ ಸೇರಿ 14 ಮತಗಳನ್ನು ಹೊಂದಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಜೆಡಿಎಸ್‌ನ ಆಂತರಿಕ ಭಿನ್ನಾಭಿಪ್ರಾಯವನ್ನು ಕಾಂಗ್ರೆಸ್ ಬಳಸಿಕೊಂಡು ಮಾಗಡಿ ಪುರಸಭೆ ಅಧಿಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ
Subscribe to 'silkcityktk'
Welcome to 'silkcityktk'!
By subscribing to my site, you'll be the first to receive notifications and emails about the latest updates, including new posts.
Join SlashPage and subscribe to 'silkcityktk'!
Subscribe
👍
Silk_City
ನಾಳೆ ವಿದ್ಯುತ್ ವ್ಯತ್ಯಯ
ಮಾಗಡಿ: ಬೆವಿಕಂ ಉಪ-ವಿಭಾಗ ವ್ಯಾಪ್ತಿಯಲ್ಲಿ ಸೆ.22ರಂದು ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಕೆಪಿಟಿಸಿಎಲ್ ಮಾಗಡಿ ವಿದ್ಯುತ್ ಕೇಂದ್ರದಲ್ಲಿ ಕಾಮಗಾರಿ ಹಿನ್ನೆಲೆ ಮಾಗಡಿ ಟೌನ್ ಹಾಗೂ ಪುರಸಭಾ ವ್ಯಾಪ್ತಿಯ ಎಲ್ಲಾ ಪ್ರದೇಶಗಳು, ಮಾಡಬಾಳ್, ಬೆಳಗುಂಬ, ನೇತೇನಹಳ್ಳಿ, ತಗ್ಗಿಕುಪ್ಪೆ, ಕಲ್ಯಾ, ಕಾಳಾರಿ ಕಾವಲ್ ಪಂಚಾಯಿತಿಗಳ ವ್ಯಾಪ್ತಿಗೆ ಸೇರಿದ ಎಲ್ಲಾ ಗ್ರಾಮಗಳು, ವಿ.ಜಿ.ದೊಡ್ಡಿ, ಅಜ್ಜನಹಳ್ಳಿ, ಗವಿನಾಗಮಂಗಲ, ಮಂಚನಬೆಲೆ, ಸಾವನದುರ್ಗ, ಅತ್ತಿಂಗೆರೆ, ಹಂಚಿಕುಪ್ಪೆ, ತ್ಯಾಗದೆರೆಪಾಳ್ಯ, ಬಾಳೇನಹಳ್ಳಿ, ಹೇಳಿಗೆಹಳ್ಳಿ, ಕೋಂಡಹಳ್ಳಿ, ಕೆಂಪಸಾಗರ ಹೂಬಿನಕೆರೆ, ಜುಟ್ಟಿನಹಳ್ಳಿ, ಹಾರೋಹಳ್ಳಿ, ವಿಶ್ವನಾಥಪುರ, ಕಾಳಾರಿ, ವರದೋಹಳ್ಳಿ, ಹಾಲಸಿಂಗನಹಳ್ಳಿ, ಕೋಡಿಪಾಳ್ಯ, ರಂಗೇಗೌಡನಪಾಳ್ಯ, ತಿಪ್ಪಗೊಂಡನಹಳ್ಳಿ, ಬಾಚೇನಹಟ್ಟಿ ಸೇವಾನಗರ, ವರದೇನಹಳ್ಳಿ, ಅಡಕಮಾರನಹಳ್ಳಿ, ಶ್ಯಾನುಭೋಗನಹ ಳ್ಳಿ,ಚಿಕ್ಕಹೊರೆಪಾಳ್ಯ, ಮತ್ತೀಕರೆ (ಹೇಳಿಗೆಹಳ್ಳಿ), ಗೆಜ್ಜೆಗಾರಗುಪ್ಪೆ, ಮತ್ತೀಕೆರೆ, ಲಕ್ಕಸಂದ್ರ, ಕೊಟ್ಟಿಗಾರಹಳ್ಳಿ, ಚಿಟ್ಟನಹಳ್ಳಿ, ನೇರಲವಾಡಿ, ಹುಲುವೇನಹಳ್ಳಿ, ಹುಲಿಕಟ್ಟೆ, ಚಕ್ರಭಾವಿ. ಅಗಲಕೋಟೆ ಹ್ಯಾಂಡ್ ಪೋಸ್ಟ್, ಬೆಸ್ತರಪಾಳ್ಯ, ಸೀಗೆತುಪ್ಪೆ, ಅರಳಕುಪ್ಪೆ, ಸಾತನೂರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Silk_City
C E O ಕಾಮಗಾರಿ ಪರಿಶೀಲನೆ
ಮಾಗಡಿ ತಾಲೂಕಿನ ಮಾಡಬಾಳ್ ಮತ್ತು ಕಲ್ಯಾ ಗ್ರಾಪಂ ವ್ಯಾಪ್ತಿಯ ಎಸ್‌ಬಿಎಂ ಹಾಗೂ ನರೇಗಾ ಯೋಜನೆ ಯಡಿ ಅನುಷ್ಠಾನಗೊಳಿಸಿರುವ ವಿವಿಧ ಕಾಮಗಾರಿಗಳನ್ನು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡೈ ಹಾಗೂ ಇತರೆ ಅಧಿಕಾರಿಗಳು ವೀಕ್ಷಿಸಿದರು. ತಾಲೂಕಿನ ಮಾಡಬಾಳ್ ಗ್ರಾಪಂ ವ್ಯಾಪ್ತಿಯ ಸೊಣ್ಣೆನಹಳ್ಳಿ ಮತ್ತು ಬಾಳೆಕಟ್ಟೆ ಗ್ರಾಮದ ಕಮ್ಯುನಿಟಿ ಸೋಕ್‌ಪಿಟ್, ತೂಬಿನಕೆರೆ ಗ್ರಾಮದ ಚರಂಡಿ ಸಂಸ್ಕರಣಾ ಕಾಮಗಾರಿ, ಗೊಲ್ಲರಹಟ್ಟಿ ಮತ್ತು ವಿಠಲಾಪುರದ ಕಮ್ಯುನಿಟಿ ಸೋಕ್‌ಪಿಟ್, ದ್ರವ ತ್ಯಾಜ್ಯ ಘಟಕ ಕಾಮಗಾರಿ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
Silk_City
ದಲಿತ ಅಧಿಕಾರಿಗೆ ಅಪಮಾನ ?
ಪಟ್ಟಣದಲ್ಲಿ ಸೆ.13ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿದ್ದ ವೇದಿಕೆಯಿಂದ ದಲಿತ ಅಧಿಕಾರಿಯನ್ನು ಬಲವಂತವಾಗಿ ತೆರಳುವಂತೆ ಮಾಡಿರುವುದನ್ನು ತಾಪಂ ಮಾಜಿ ಸದಸ್ಯ ಮಾಡಬಾಳ್‌ ಜಯರಾಂ ಖಂಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧಮಂತ್ರಿಗಳು, ಶಾಸಕರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದ ವೇದಿಕೆಯಲ್ಲಿ ರಾಮನಗರ ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸರೋಜಾದೇವಿ ಅವರನ್ನು ದಲಿತ ಸಮುದಾಯದ ಮಹಿಳೆ ಎಂಬ ಕಾರಣದಿಂದಾಗಿ ವೇದಿಕೆಯಿಂದ ಹಿಂದೆ ಸರಿಯುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಮಾರಂಭದ ಆಯೋಜಕರು ಹಿಂದೆಸರಿಯುವಂತೆ ಮಾಡಿರುವುದು ಅವಮಾನ. ಇನ್ನು ಮುಂದೆಯಾದರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಯೋಜಿಸುವ ಸಭೆಗಳು ಶಿಷ್ಟಾಚಾರದಿಂದ ಕೂಡಿರುವಂತೆ ಗಮನಹರಿಸಬೇಕೆಂದು ಒತ್ತಾಯಿಸಿದರು. ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ ಮಾತನಾಡಿ, ದಲಿತ ಸಮುದಾಯದ ಅಧಿಕಾರಿಗಳಿಗಾಗಲಿ ಅಥವಾ ಮುಖಂಡರಿಗಾಗಲಿ ದೊಡ್ಡಮಟ್ಟದ ಕಾರ್ಯಕ್ರಮದಲ್ಲಿ ಸೂಕ್ತ ಸ್ಥಾನ ನೀಡಬೇಕು. ದಲಿತ ಸಮುದಾಯದ ಅಧಿಕಾರಿಯನ್ನು ಅವಮಾನಿಸಿರುವುದು ದುರದೃಷ್ಟಕರ. ಈ ಘಟನೆಯಿಂದ ಮಹಿಳಾ ಅಧಿಕಾರಿ ಬಹಳ ಬೇಸರ ವ್ಯಕ್ತಪಡಿಸಿದರು. ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದರು. ಹಿರಿಯ ದಲಿತ ಮುಖಂಡರಾದ ಹನುಮಂತಯ್ಯ ಮಾತನಾಡಿ, ಶಾಸಕರು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ತಾಲೂಕಿನ ದಲಿತ ಮುಖಂಡರನ್ನು ಮುಖ್ಯವಾಹಿನಿಗೆ ತರಬೇಕೆಂದರು. ದಲಿತ ಮುಖಂಡರಾದ ಹನುಮಂತಯ್ಯ, ಪುಟ್ಟಸ್ವಾಮಿ ಇತರರು ಹಾಜರಿದ್ದರು.