Share
Sign In
ಚನ್ನಪಟ್ಟಣ
ಖಾಸಗಿ ವ್ಯಕ್ತಿಯ ಹೆಸರಿಗೆ ವಿರೋಧ
S
Silk_City
👍
ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಸರ್ಕಾರಿ ಜಾಗದಲ್ಲಿ ಜನಪ್ರತಿನಿಧಿಗಳ ಕ್ಷೇತ್ರಾಭಿವೃದ್ಧಿ ಅನುದಾನದಡಿ ನಿರ್ಮಿಸುತ್ತಿರುವ ಸಾಂಸ್ಕೃತಿಕ ಭವನಕ್ಕೆ ಖಾಸಗಿ ವ್ಯಕ್ತಿ ಹೆಸರಿಡುವುದನ್ನು ಕೋಲೂರು ಗ್ರಾಮಸ್ಥರು ವಿರೋಧಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಇಂದುಕುಮಾ‌ರ್, ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಭವ ನಕ್ಕೆ ವ್ಯಕ್ತಿಯೊಬ್ಬರ ಹೆಸರಿವುದು ಸರಿ ಯಲ್ಲ. ಕೂಡಲೇ ಈ ನಿರ್ಣಯವನ್ನು ಕೈಬಿಡಬೇಕು. ಸಾಂಸ್ಕೃತಿಕ ಭವನ ಗ್ರಾಮ ಪಂಚಾಯಿತಿಗೆ ಸೇರಿದ ಸ್ವತ್ತಾಗಿದ್ದು, ಭವನದ ನಿರ್ಮಾಣಕ್ಕೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಪಡೆಯಲಾಗಿದೆ. ಆಗಾಗಿ ಯಾವುದೇ ಖಾಸಗಿ ವ್ಯಕ್ತಿಯ ಹೆಸರಿಡಬಾರದು ಎಂದು ತಿಳಿಸಿದರು
Subscribe to 'silkcityktk'
Welcome to 'silkcityktk'!
By subscribing to my site, you'll be the first to receive notifications and emails about the latest updates, including new posts.
Join SlashPage and subscribe to 'silkcityktk'!
Subscribe
👍
Silk_City
954 ನಿವೇಶನಗಳ ಹಂಚಿಕೆ
ಚನ್ನಪಟ್ಟಣ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸಚಿವರಾದ ಜಮೀ‌ಅಹಮದ್ ಖಾನ್ ಹಾಗೂ ರಹೀಂ ಖಾನ್ ರವರ ಜೊತೆಗೂಡಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನಿವೇಶನ ರಹಿತರಿಗೆ 954 ನಿವೇಶನಗಳನ್ನು ಹಂಚಿಕೆ ಮಾಡಿದರು. ಪಟ್ಟಣದ ಪ್ರದೇಶದಲ್ಲಿನ ವಸತಿ ರಹಿತರಿಗೆ 528, ಪಟ್ಟು ಗ್ರಾಮದಲ್ಲಿ 200, ಕೂಡೂರು-150, ವೈ.ಟಿ.ಹಳ್ಳಿಯ ವಸತಿ ರಹಿತರಿಗೆ 76 ಸೇರಿ ಒಟ್ಟು 954 ನಿವೇಶನಗಳನ್ನು ನಗರ ಆಶ್ರಯ ಸಮಿತಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಹಂಚಿದರು. ಡಿ.ಕೆ.ಶಿವಕುಮಾ‌ರ್ ರವರು ಮನೆಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದ ಮೂಲಕ ಜಿಲ್ಲೆಯ ಅಧಿಕಾರಿ ವರ್ಗವನ್ನು ಪ್ರತಿ ಜಿಪಂಗೆ ಕರೆದೊಯ್ದು ಸಾರ್ವಜನಿಕರ ಅಹವಾಲು ಆಲಿಸಿ, 9,731 ಅರ್ಜಿ ಸ್ವೀಕರಿಸಿದ್ದರು. ಇವುಗಳಲ್ಲಿ ನಿವೇಶನ ಕೋರಿ ಬಂದಂತಹ 8,112 ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿ 6,660 ಅರ್ಜಿಗಳ ತಾತ್ಕಾಲಿಕ ವಸತಿ ರಹಿತರ ಪಟ್ಟಿ ತಯಾರಿಸಲಾಯಿತು. ಇದರಲ್ಲಿ ಪೂರ್ಣ ದಾಖಲೆಗಳನ್ನು ಸಲ್ಲಿಸಿದ ಗ್ರಾಮೀಣ ಹಾಗೂ ನಗರ ಭಾಗದ 2,069 ಜನರಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಚನ್ನಪಟ್ಟಣ ನಗರ ನಿವಾಸಿಗಳಿಗೆ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಐಡಿಎಸ್ ಎಸ್ ಎಂಟಿ (ಐಈಖಖಖಖ) ಲೇಔಟ್ ಬಳಿ 10 ಎಕರೆ 6 ಗುಂಟೆ ವಿಸ್ತೀರ್ಣದಲ್ಲಿ ನಿವೇಶನಗಳನ್ನು ವಿತರಿಸಲು ಲಾಟರಿ ಮೂಲಕ ಫಲನುಭವಿಗಳನ್ನು ಆಯ್ಕೆ ಮಾಡಿ 300 ನಿವೇಶನಗಳನ್ನು ಹಂಚಬೇಕಾಗಿತ್ತು. ಆದರೆ, ವಸತಿ ಸಚಿವ ಜಮೀ‌ಅಹಮದ್ ರವರು ನಿವೇಶನದ ಬದಲು ಜಿ ಪ್ಲಸ್ 2 ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ಇದರ ಜೊತೆಗೆ 2,300 ಮನೆಗಳನ್ನು ವಸತಿ ರಹಿತರಿಗೆ ಬಸವ ವಸತಿ ಯೋಜನೆ-ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದವರಲ್ಲಿ ಪರಿಶಿಷ್ಟ ಜಾತಿ ಫಲಾನುಭವಿಗಳ ಸಂಖ್ಯೆ 339, ಪರಿಶಿಷ್ಟ ಪಂಗಡ 39, ವಿಶೇಷ ಚೇತನರು 41, ಅಲ್ಪಸಂಖ್ಯಾತರು 990, ಇತರೆ ವರ್ಗದ 660 ಜನರನ್ನು ಆಯ್ಕೆ ಮಾಡಲಾಗಿದೆ.
Silk_City
ಮಾನವ ಕುಲಕ್ಕೆ ಅವಮಾನ
ಚನ್ನಪಟ್ಟಣ: ಮುನಿರತ್ನ ಮಾಡಿರೋ ಕೆಲಸ ಮಾನವ ಕುಲಕ್ಕೆ ಅವಮಾನ. ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಮುನಿರತ್ನ ಅತ್ಯಾಚಾರ ಪ್ರಕರಣ ಎಸ್‌ಐಟಿಗೆ ವಹಿಸೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುನಿರತ್ನ ಅವರು ಕೇವಲ ರಾಜಕಾರಣಿಗಳಷ್ಟೇ ಅಲ್ಲ ಪೊಲೀಸ್ ಅಧಿಕಾರಿಗಳು, ಇಂಜಿನಿಯರ್‌ಗಳು, ಬೆಂಬಲಿಗರ ಮೇಲೂ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಹನಿಟ್ರ್ಯಾಪ್ ಸಂಬಂಧ ಈಗಾಗಲೇ ಎರಡು ಕಡೆ ದೂರು ದಾಖಲಾಗಿವೆ. ಹಾಗಾಗಿ ದಕ್ಷ ಅಧಿಕಾರಿಗಳ ವಿಶೇಷತಂಡರಚಿಸಿಸಮಗ್ರ ತನಿಖೆ ಮಾಡಿ ಕಠಿಣ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
Silk_City
ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಚನ್ನಪಟ್ಟಣ: ತಾಲೂಕು ವ್ಯಾಪ್ತಿಯಲ್ಲಿ ಸುಮಾರು ನೂರಾರು ಕೋಟಿ ರೂ. ವೆಚ್ಚದ 19 ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ತಾಲೂಕಿನ ಮೈಲನಾಯಕನಹಳ್ಳಿ ಗ್ರಾಪಂ ವ್ಯಾಪ್ತಿಯ ಹನುಮಾಪುರದೊಡ್ಡಿ, ಹರೂರು ಗ್ರಾಮದ ಸಿಸಿ ರಸ್ತೆ ಕಾಮಗಾರಿ, ಮೈಲನಾಯಕನಹೊಸಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ, ತಿಟ್ಟಮಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಪಟ್ಟು ಮತ್ತು ಚಿಕ್ಕನದೊಡ್ಡಿ ಗ್ರಾಮದಲ್ಲಿ ಸಿಸಿ ಮತ್ತು ಚರಂಡಿ ರಸ್ತೆ ನಿರ್ಮಾಣ ಕಾಮಗಾರಿ, ಅಕ್ಕೂರು ಗ್ರಾಪಂ ವ್ಯಾಪ್ತಿಯ ಅನ್ವೇರಹಳ್ಳಿ ಪರಿಮಿತಿಯಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿ, ಅಕ್ಕೂರು ಹೊಸಹಳ್ಳಿ ಪರಿಮಿತಿಯಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿ, ಚನ್ನಪಟ್ಟಣ- ಅಕ್ಕೂರು -ಸಾದರಹಳ್ಳಿ ಸಂಪರ್ಕ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.