Share
Sign In
ಕನಕಪುರ
ದಿನಾಂಕ 04/09/24 ರಂದು ಅನುಸೂಯ ಮಂಜುನಾಥ್ ಆಗಮನ
S
Silk_City
👍
ಕನಕಪುರ ವಿಧಾನಸಭಾ ಕ್ಷೇತ್ರದ, ಕಸಬಾ ಹೋಬಳಿ ಚಿರಣಕುಪ್ಪೆ ಹಾಗೂ ದ್ಯಾಪೆಗೌಡನ ದೊಡ್ಡಿ ಗ್ರಾಮಸ್ಥರು ಬಸವೇಶ್ವರ ದೇವಸ್ಥಾನಕ್ಕೆ ಪೂಜಾ ಕಾರ್ಯಕ್ರಮ ಇರುವುದರಿಂದ ಲೋಕಸಭಾ ಸದಸ್ಯರ ಸಿ.ಎನ್ ಮಂಜುನಾಥ್ ಅವರ ಧರ್ಮಪತ್ನಿ ಶ್ರೀಮತಿ ಅನುಸೂಯಕ್ಕನವರು ದಿನಾಂಕ 04/09/2024 ರ ಬುದುವಾರ ಬೆಳಿಗ್ಗೆ 10 ಗಂಟೆಗೆ ಆಗಮಿಸಲಿದ್ದಾರೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಆಗಮಿಸಬೇಕಾಗಿ ತಮ್ಮಲ್ಲಿ ವಿನಂತಿಗಳು ಎಂದು,
ಬಿ ನಾಗರಾಜ್ ಕನಕಪುರ ತಾಲೂಕು ಜೆಡಿಎಸ್ ಅಧ್ಯಕ್ಷರು ತಿಳಿಸಿದ್ದಾರೆ.
Subscribe to 'silkcityktk'
Welcome to 'silkcityktk'!
By subscribing to my site, you'll be the first to receive notifications and emails about the latest updates, including new posts.
Join SlashPage and subscribe to 'silkcityktk'!
Subscribe
👍
Silk_City
ಕುಡಿಯುವ ನೀರಿನ ಸಮಸ್ಯೆ
ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ನೀರಿಗೆ ತೊಂದರೆಯಾಗದಂತೆ ಶಾಶ್ವತವಾದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಳ್ಳಿಮಾರನಹಳ್ಳಿ ಗ್ರಾಮಪಂಚಾಯ್ತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು. ಅಳ್ಳಿಮಾರನಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷೆ ಗೌರಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ದಿಲೀಪ್, ಮಂಜು ಸೇರಿದಂತೆ ಹಲವು ಸದಸ್ಯರು ಮಾತನಾಡಿದರು. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಜನರಿಗೆ ತೊಂದರೆಯಾಗದಂತೆ ರೈತರ ಬೊರ್‌ವೆಲ್‌ಗಳಿಂದ ನೀರು ಪೂರೈಕೆ ಮಾಡುತ್ತಿದ್ದಿರಿ ಆದರೆ ಅದು ಶಾಶ್ವತವಲ್ಲ ಹೊಸದಾಗಿ ಬೋರ್‌ವೆಲ್ ಗಳನ್ನು ತೆಗೆದು ಮುಂದೆ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಪಂಚಾಯತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಟಿ..ಕೃಷ್ಣ ಮಾತನಾಡಿ, ಕಳೆದ ವರ್ಷ ಮಳೆ ಇಲ್ಲದೆ ಬರಗಾಲ ಮತ್ತು ವಿಪರೀತವಾದ ತಾಪಮಾನದಿಂದ ಕೆರೆ ಕಟ್ಟೆಗಳಲ್ಲಿ ನೀರಿ ಅಳ್ಳಿಮಾರನಹಳ್ಳಿ ಗ್ರಾಮಪಚಾಯ್ತಿ ಅಧ್ಯಕ್ಷೆ ಗೌರಮ್ಮ ಅವರ ಲ್ಲದೆ ಬತ್ತಿಹೋಗಿವೆ ಈ ವರ್ಷವೂ ಸಹ ನಿರೀಕ್ಷೆಯಂತೆ ಮುಂಗಾರು ಮಳೆಯಾಗಿಲ್ಲ ತಾಲೂಕಿನ ಮಳೆಯ ಪ್ರಮಾಣ ಕಡಿಮೆಯಾಗಿರುವುದು ಜೊತೆಗೆ ಕೆರೆಕಟ್ಟೆಗಳಲ್ಲಿ ನೀರಿನ ಕೊರತೆಯಿರುವುದರಿಂದ ಅಂತರ್ಜಲ ಕುಗ್ಗಿ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಬರಿದಾಗಿವೆ, ಜಿಲ್ಲಾ ಪಂಚಾಯತಿಯಿಂದ ಬೋರ್‌ವೆಲ್ ಕೊರೆಸುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಈಗಾಗಲೇ ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಅಚ್ಚಮಾರನಹಳ್ಳಿ ಗ್ರಾಮ ಪಂಚಾಯ ಸಾಮಾನ್ಯ ಸಭೆ هم ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಪ್ರಕರಣವನ್ನು ನಿಯಂತ್ರಣಕ್ಕೆ ತರಲು ಆದ್ಯತೆ ನೀಡಿ ಕೊಳಚೆ ನೀರು ನಿಲ್ಲದಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು, ಮ ಕ್ಕಳ ಆರೋಗ್ಯದ ಮೇಲೆ ನಿಗಾವಸಬೇಕು, ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು. ಗ್ರಾಪಂ ಉಪಾಧ್ಯಕ್ಷೆ ಸುಜಾತ, ತಮ್ಮಣ್ಣಿ, ಸದಸ್ಯರಾದ ರಾಜುಗಾಂಧಿ, ದಿಲೀಪ್, ಲಕ್ಷ್ಮಮ್ಮ, ದೇವರಾಜು, ಕಿರಣ್, ಸುಧಾರಾಣಿ,ಎಸ್.ಡಿ.ಎ. ಸುಮ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.
Silk_City
ನಿಂದನೆ ಖಂಡನೀಯ : ಚಂದ್ರು ಹಾರೋಹಳ್ಳಿ
ಭ್ರಷ್ಟಾಚಾರದ ವಿರುದ್ಧ ನಿರ್ಭೀತಿಯಿಂದ ನೇರವಾಗಿ ಪ್ರಶ್ನಿಸುತ್ತಿರುವ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಸಚಿವರಾದಪ್ರಿಯಾಂಕ್ ಖರ್ಗೆ ಮತ್ತು ಎಂ.ಬಿ.ಪಾಟೀಲ್ ನಿಂದನೆ ಮಾಡುತ್ತಿರುವುದನ್ನು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು ಖಂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ, ವಂಚಿತ ಮತ್ತು ಪೀಡಿತ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಬದಲು ದಲಿತರ ಹೆಸರಿನಲ್ಲಿ ಸರ್ವರನ್ನು ಬಾಚಿಕೊಂಡು ಖರ್ಗೆರವರು ತಮ್ಮ ಕುಟುಂಬವನ್ನು ಭದ್ರ ಪಡಿಸಿಕೊಳ್ಳುತ್ತಿದ್ದಾರೆ. ಆ ಕುಟುಂಬದ ನ್ಯೂನತೆಗಳನ್ನು ಎತ್ತಿ ಹಿಡಿದು ತಳ ಸಮುದಾಯಗಳಿಗೆ ನ್ಯಾಯ ಕೊಡಿಸಲು ಛಲವಾದಿ ನಾರಾಯಣಸ್ವಾಮಿ ಹೋರಾಡುತ್ತಿರುವುದನ್ನು ಕಾಂಗ್ರೆಸ್ ನಾಯಕರು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು. ಎಂ.ಬಿ.ಪಾಟೀಲ್ ರವರು ಅವನು ಶೆಡ್ ಗಿರಾಕಿ ಎಂದು ಹೇಳಿರುವುದು ಒಬ್ಬ ದಲಿತ ನಾಯಕರಿಗೆ ಮಾಡಿರುವ ಅಪಮಾನ. ಮಂಡ್ಯದ ಎಂ.ಡಿ.ಜಯರಾಮ್ ಗತಿ ಏನಾಯಿತು? ಕುಮಾರಿ ಮಲ್ಲಾಜಮ್ಮನ ಕಥೆ ಏನಾಯಿತು? ಅವರನ್ನು ವ್ಯವಸ್ಥಿತವಾಗಿ ಹೇಗೆ ಮೂಲೆಗುಂಪು ಮಾಡಿದ್ದೀರಿ. ಮೂರು ಬಾರಿ ಚುನಾವಣೆಯಲ್ಲಿ ಗೆದ್ದು ಬಂದಂತಹ ಮಳವಳ್ಳಿಯ ಶಾಸಕರಾದ ನರೇಂದ್ರಸ್ವಾಮಿ ರವರನ್ನು ಸಚಿವ ಸಂಪುಟಕ್ಕೆ ಸೇರಿಸದೆ ಮಂತ್ರಿಯನ್ನು ಮಾಡದೆ ಹೇಗೆ ನಿಯಂತ್ರಣ ಮಾಡಿಕೊಂಡು ಬಂದಿದ್ದೀರಿ ಎಂದು ಟೀಕಿಸಿದರು. ಮೈಸೂರು ಭಾಗದ ದಲಿತ ಅಧಿಕಾರಿಗಳು ಕಷ್ಟಪಟ್ಟು ದುಡಿದಿದ್ದ ಸಂಭಾವನೆಗಳಲ್ಲಿ ಕೂಡಿಟ್ಟಿದ್ದ ಹಣದಿಂದ ನಿರ್ಮಿಸಿದ ಡಾಕ್ಟರ್‌ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಹೆಸರಿನಲ್ಲಿ ತೆರೆದ ಮೆಡಿಕಲ್‌ ಕಾಲೇಜು ಏನಾಯಿತು. ಇಂದು ಎಲ್ಲರನ್ನೂ ಹೊರದಬ್ಬಿ ನೀವೇ ಅನುಭವಿಸುತ್ತಿದ್ದೀರಿ ಇದು ಯಾವ ದಲಿತ ಪ್ರೇಮ ಎಂದು ಪ್ರಶ್ನಿಸಿದರು.
Silk_City
ಪರಿಸರ ಪ್ರೇಮ ಮುಖ್ಯ : ವಿ ಬಾಬು
ಕನಕಪುರ: ಆತ್ಮೀಯ ಹಿಂದೂ ಧಾರ್ಮಿಕ ಬಂಧುಗಳೇ ಗೌರಿ ಗಣಪನ ಹಬ್ಬ ಹೊಸ್ತಿಲಲ್ಲಿದ್ದು ಹೆಣ್ಣು ಮಕ್ಕಳು ನೀಡುವ ಬಾಗಿನದಲ್ಲಿ ಸಾಧ್ಯವಾದಷ್ಟೂ ಕಡಿಮೆ ಪ್ಲಾಸ್ಟಿಕ್ ಬಳಸಿ ಪರಿಸರ ಪ್ರೇಮ ತೋರುವಂತೆ ಅಂಬೇಡ್ಕರ್‌ಕ್ರಾಂತಿ ಸೇನೆ ಹಾಗೂ ಮಾನವಹಕ್ಕುಗಳ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷವಿ. ಬಾಬು ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಬ್ಬದ ಸಮಯದಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಬದಲು ನ್ಯೂಸ್ ಪೇಪರಿನಿಂದ ಕವ‌ರ್, ಹಳೆಯ ಆಹ್ವಾನ ಪತ್ರಿಕೆಯ ಕವರುಗಳನ್ನು ಮರು ಬಳಕೆ ಮಾಡಬಹುದು, ಬಟ್ಟೆಯ ಚೀಲಗಳನ್ನು ಬಳಸಬಹುದಾಗಿದ್ದು ಆದರೆ ಅವು ಸುಲಭವಾಗಿ ಗೊಬ್ಬರವಾಗದಿರುವುದರಿಂದ ಪೇಪರ್‌ಕವರ್ ಬಳಸುವಂತೆ ಮನವಿ ಮಾಡಿದರು. ತಾಯಿ ಗೌರಮ್ಮನ ಹೆಸರಿನಲ್ಲಿ ಮತ್ತೊಬ್ಬ ತಾಯಿ ಭೂಮಿಯನ್ನು ಮರೆಯದೆ ಪರಿಸರ ಸ್ನೇಹಿ ಗಣಪ, ಗೌರಿ ಯೊಂದಿಗೆ ನಿಮ್ಮ ಹಬ್ಬದ ಮೆರುಗು ಹೆಚ್ಚಿ ದೇವರು ಇಡೀ ಮನುಕುಲಕ್ಕೆ ಆರೋಗ್ಯ, ಆಯಸ್ಸು, ಸುಖ, ಶಾಂತಿ ನೀಡಿ ಜೀವನದಲ್ಲಿ ನೆಮ್ಮದಿ ನೆಲಸಲಿ ಎಂದು ಹಾರೈಸಿದರು.