Share
Sign In
ಚನ್ನಪಟ್ಟಣ
ಅಭ್ಯುದಯ ಮಹಿಳಾ ಬ್ಯಾಂಕ್ ಗೆ 25ರ ಸಂಭ್ರಮ
S
Silk_City
👍
ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ 24 ವಸಂತಗಳನ್ನು ಪೂರೈಸಿ, 25ನೇ ವರ್ಷಕ್ಕೆ ಕಾಲಿಡುತಿದ್ದು, ಪ್ರಸ್ತುತ 3,389 ಮಹಿಳಾ ಸದಸ್ಯರನ್ನು ಒಳಗೊಂಡು 50.43 ಲಕ್ಷ ರು. ಷೇರು ಬಂಡವಾಳ ಹೊಂದಿದ್ದು, 6.94 ಕೋಟಿ ವಹಿವಾಟು ನಡೆಸಿದೆ ಎಂದು ಬ್ಯಾಂಕ್ ಅಧ್ಯಕ್ಷೆ ಸುಮತ ಧನಂಜಯ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಶ್ರೇಯೋ ಭಿವೃದ್ಧಿಗಾಗಿ 1999ರಲ್ಲಿ ವಿಜಯ ಲಕ್ಷ್ಮಿರಾಮಣ್ಣ ಬ್ಯಾಂಕ್ ಪ್ರಾರಂಭಿ ಸಿದರು. ಅಂದಿನಿಂದ ಸಾವಿರಾರು ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿದೆ. ಷೇರುದಾರರು ಮತ್ತು ಸಾರ್ವಜನಿಕರು ಹಾಗೂ ಠೇವಣಿದಾರರು ಹೆಚ್ಚು ಠೇವಣಿಗಳನ್ನಿಟ್ಟು ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು. ಸೆ. 21ರಂದು ಬ್ಯಾಂಕ್ ನ ಸರ್ವ ಸದಸ್ಯರ ವಾರ್ಷಿಕ ಸಭೆ ನಡೆಲಿದ್ದು, ಅಂದು ಎಲ್ಲ ಸದಸ್ಯರು ಭಾಗವಹಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ನ ಆಡಳಿತಮಂಡಳಿ ನಿರ್ದೇಶಕಿಯರಾದ ಕೆ.ಪಿ.ಸುನಂದಮ್ಮ, ಎಂ.ಜಯಮ್ಮ, ಎಸ್.ರೇಖಾ,ಎಸ್. ನಿಂಗರಾಜಮ್ಮ,
ಎಚ್.ಕೆ.ಆಶಾ, ಇಂದುಮತಿ,
ಶಶಿಕಲಾ, ಉಮಾ ಹಾಗೂ ಸಿಬ್ಬಂದಿ
ಇತರರು ಉಪಸ್ಥಿತರಿದ್ದರು.
Subscribe to 'silkcityktk'
Welcome to 'silkcityktk'!
By subscribing to my site, you'll be the first to receive notifications and emails about the latest updates, including new posts.
Join SlashPage and subscribe to 'silkcityktk'!
Subscribe
👍
Silk_City
ಮಾನವ ಕುಲಕ್ಕೆ ಅವಮಾನ
ಚನ್ನಪಟ್ಟಣ: ಮುನಿರತ್ನ ಮಾಡಿರೋ ಕೆಲಸ ಮಾನವ ಕುಲಕ್ಕೆ ಅವಮಾನ. ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಮುನಿರತ್ನ ಅತ್ಯಾಚಾರ ಪ್ರಕರಣ ಎಸ್‌ಐಟಿಗೆ ವಹಿಸೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುನಿರತ್ನ ಅವರು ಕೇವಲ ರಾಜಕಾರಣಿಗಳಷ್ಟೇ ಅಲ್ಲ ಪೊಲೀಸ್ ಅಧಿಕಾರಿಗಳು, ಇಂಜಿನಿಯರ್‌ಗಳು, ಬೆಂಬಲಿಗರ ಮೇಲೂ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಹನಿಟ್ರ್ಯಾಪ್ ಸಂಬಂಧ ಈಗಾಗಲೇ ಎರಡು ಕಡೆ ದೂರು ದಾಖಲಾಗಿವೆ. ಹಾಗಾಗಿ ದಕ್ಷ ಅಧಿಕಾರಿಗಳ ವಿಶೇಷತಂಡರಚಿಸಿಸಮಗ್ರ ತನಿಖೆ ಮಾಡಿ ಕಠಿಣ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
Silk_City
ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಚನ್ನಪಟ್ಟಣ: ತಾಲೂಕು ವ್ಯಾಪ್ತಿಯಲ್ಲಿ ಸುಮಾರು ನೂರಾರು ಕೋಟಿ ರೂ. ವೆಚ್ಚದ 19 ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ತಾಲೂಕಿನ ಮೈಲನಾಯಕನಹಳ್ಳಿ ಗ್ರಾಪಂ ವ್ಯಾಪ್ತಿಯ ಹನುಮಾಪುರದೊಡ್ಡಿ, ಹರೂರು ಗ್ರಾಮದ ಸಿಸಿ ರಸ್ತೆ ಕಾಮಗಾರಿ, ಮೈಲನಾಯಕನಹೊಸಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ, ತಿಟ್ಟಮಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಪಟ್ಟು ಮತ್ತು ಚಿಕ್ಕನದೊಡ್ಡಿ ಗ್ರಾಮದಲ್ಲಿ ಸಿಸಿ ಮತ್ತು ಚರಂಡಿ ರಸ್ತೆ ನಿರ್ಮಾಣ ಕಾಮಗಾರಿ, ಅಕ್ಕೂರು ಗ್ರಾಪಂ ವ್ಯಾಪ್ತಿಯ ಅನ್ವೇರಹಳ್ಳಿ ಪರಿಮಿತಿಯಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿ, ಅಕ್ಕೂರು ಹೊಸಹಳ್ಳಿ ಪರಿಮಿತಿಯಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿ, ಚನ್ನಪಟ್ಟಣ- ಅಕ್ಕೂರು -ಸಾದರಹಳ್ಳಿ ಸಂಪರ್ಕ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
Silk_City
ಖಾಸಗಿ ವ್ಯಕ್ತಿಯ ಹೆಸರಿಗೆ ವಿರೋಧ
ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಸರ್ಕಾರಿ ಜಾಗದಲ್ಲಿ ಜನಪ್ರತಿನಿಧಿಗಳ ಕ್ಷೇತ್ರಾಭಿವೃದ್ಧಿ ಅನುದಾನದಡಿ ನಿರ್ಮಿಸುತ್ತಿರುವ ಸಾಂಸ್ಕೃತಿಕ ಭವನಕ್ಕೆ ಖಾಸಗಿ ವ್ಯಕ್ತಿ ಹೆಸರಿಡುವುದನ್ನು ಕೋಲೂರು ಗ್ರಾಮಸ್ಥರು ವಿರೋಧಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಇಂದುಕುಮಾ‌ರ್, ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಭವ ನಕ್ಕೆ ವ್ಯಕ್ತಿಯೊಬ್ಬರ ಹೆಸರಿವುದು ಸರಿ ಯಲ್ಲ. ಕೂಡಲೇ ಈ ನಿರ್ಣಯವನ್ನು ಕೈಬಿಡಬೇಕು. ಸಾಂಸ್ಕೃತಿಕ ಭವನ ಗ್ರಾಮ ಪಂಚಾಯಿತಿಗೆ ಸೇರಿದ ಸ್ವತ್ತಾಗಿದ್ದು, ಭವನದ ನಿರ್ಮಾಣಕ್ಕೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಪಡೆಯಲಾಗಿದೆ. ಆಗಾಗಿ ಯಾವುದೇ ಖಾಸಗಿ ವ್ಯಕ್ತಿಯ ಹೆಸರಿಡಬಾರದು ಎಂದು ತಿಳಿಸಿದರು