ಕುರ್ಚಿ ಖಾಲಿ ಇಲ್ಲ : ಇಕ್ಬಾಲ್ ಹುಸೇನ್
ರಾಮನಗರ: ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಒಳ್ಳೆಯ ಆಡಳಿತ ಮತ್ತು ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಇನ್ಸಾಲ್ ಹುಸೇನ್ ಪ್ರತಿಕ್ರಿಯೆ ನೀಡಿದರು.ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಆರ್.ವಿ.ದೇಶಪಾಂಡೆರವರು ನಾನೇ ಸಿಎಂ ಆಗುತ್ತೇನೆಂದು ನೀಡಿರುವ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದಾಗ ಶಾಸಕ ಇಟ್ಬಾಲ್ ಹುಸೇನ್ ಮುಗುಳಕ್ಕರು. ಅದು ದೇಶಪಾಂಡೆ ಅವರ ವೈಯಕ್ತಿಕ ವಿಚಾರ. ಪ್ರಜಾಪ್ರಭುತ್ವದಲ್ಲಿ ಯಾರು ಏನ್ ಬೇಕಾದರು ಆಸೆ ಪಡಬಹುದು.ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ. ಬೇರೆ ಪಕ್ಷದವರು ನಮ್ಮ ಮೇಲೆ ಟೀಕೆ ಮಾಡುವುದು ಸಹಜ ಎಂದರು.ಹಗರಣಗಳು ಒಂದೊಂದಾಗಿ ಬಯಲಾಗುವ ಸಂದರ್ಭ ಬಂದಿದೆ. ಭ್ರಷ್ಟರಾದವರು, ಉಪ್ಪುತಿಂದವರು ನೀರು ಕುಡಿಯುತ್ತಾರೆ. ಒಳ್ಳೆಯವರಿಗೆ ಅವಕಾಶ ಸಿಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಬಗ್ಗೆ ಕೇಳಿದ ಈ ಪ್ರಶ್ನೆಗೆ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಅವರು ಕೊಟ್ಟಿರುವ ಕೆಲಸವನ್ನು ನಿಭಾಯಿಸುತ್ತೇನೆ. ಅಲ್ಲಿ ಯಾರು ಬೇಕಾದರು ಸ್ಪರ್ಧೆ ಮಾಡಲಿ. ಅಭ್ಯರ್ಥಿ ಬಗ್ಗೆ ಪಕ್ಷದ ಹೈಕಮಾಂಡ್ ತಿರ್ಮಾನ ಮಾಡುತ್ತದೆ. ಚನ್ನಪಟ್ಟಣದವರೇ ಸ್ಪರ್ಧೆ ಮಾಡುತ್ತಾರೋ, ಹೊರಗಿನವರು ಸ್ಪರ್ಧೆ ಮಾಡುತ್ತಾರೋ.ಅದು ಹೈಕಮಾಂಡ್ ಗೆ ಬಿಟ್ಟಿದ್ದು. ನನಗೆ ಜನರು ರಾಮನಗರದಲ್ಲಿ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಜನರ ಋಣ ತೀರಿಸಬೇಕಿದೆ ಎಂದರು.