Share
Sign In
ರಾಮನಗರ
ರೈತರಿಂದ ಆಧಾರ್ ಜೋಡಣೆಗೆ ವಿರೋಧ
S
Silk_City
👍
ರಾಮನಗರ: ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್‌ಜೋಡಣೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಬುಧವಾರ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಗರದ ಬೆಸ್ಕಾಂ ಕಚೇರಿ ಮುಂಭಾಗ ಜಮಾಯಿಸಿದ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್‌ಜೋಡಣೆ ಮಾಡುತ್ತಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಕೂಡಲೇ ಇದನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಎ.ಎಲ್. ಬೈರೇಗೌಡ ಮಾತನಾಡಿ, ಈಗಾಗಲೇ ಸರ್ಕಾರ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್‌ಜೋಡಣೆ ಮಾಡಲು ನಿರ್ಧರಿಸಿದೆ. ಇದರಿಂದ ರೈತರ ಸಹಜ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ನಷ್ಟವಾಗುವ ಸಾಧ್ಯತೆಗಳಿವೆ. ಹಾಗಾಗಿ ಸರಕಾರ ಈ ಕೂಡಲೇ ರೈತರ ವಿರೋಧಿ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
Subscribe to 'silkcityktk'
Welcome to 'silkcityktk'!
By subscribing to my site, you'll be the first to receive notifications and emails about the latest updates, including new posts.
Join SlashPage and subscribe to 'silkcityktk'!
Subscribe
👍
Silk_City
ಕಾರ್ಮಿಕರ ಮಾಹಿತಿ ನೀಡಿ
ರಾಮನಗರ : 23 ಅಸಂಘಟಿತ ಕಾರ್ಮಿಕ ವರ್ಗಗಳಾದ ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್‌ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ದಿನಪತ್ರಿಕೆ ವಿತರಿಸುವ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್‌ ಕಾರ್ಮಿಕರು, ಫೊಟೋಗ್ರಾಫರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಕಲ್ಯಾಣ ಮಂಟಪ/ಸಭಾ ಭವನ/ಟೆಂಟ್‌/ಪೆಂಡಾಲ್‌ಗಳ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಬೀಡಿ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು, ಅಲೆಮಾರಿ ಪಂಗಡದ ಕಾರ್ಮಿಕರು ಮತ್ತು ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರನ್ನು ನೋಂದಾಯಿಸಲು ಹಾಗೂ ಸೌಲಭ್ಯ ವಿತರಿಸುವ ಸಲುವಾಗಿ ವರ್ಗವಾರು ಮಾಹಿತಿ ಅವಶ್ಯಕತೆಯಿದ್ದು ವಿವಿಧ-ಸಂಘ-ಸಂಸ್ಥೆಗಳಲ್ಲಿ ನೋಂದಣಿಯಾದ ಕಾರ್ಮಿಕರ ದತ್ತಾಂಶ ಸಂಗ್ರಹಿಸಬೇಕಾಗಿರುತ್ತದೆ. ಅದಕ್ಕಾಗಿ ರಾಮನಗರ ಜಿಲ್ಲೆಯ ಅಸಂಘಟಿತ ಕಾರ್ಮಿಕ ವರ್ಗಗಳ ಸಂಘ-ಸಂಸ್ಥೆಗಳು ತಮ್ಮ ಸಂಘದಲ್ಲಿ ನೋಂದಾಯಿಸಿದ ಸದಸ್ಯರ ಮಾಹಿತಿಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ರವರ ಕಚೇರಿ, 2ನೇ ಮಹಡಿ, ಕಂದಾಯ ಭವನ, ರಾಮನಗರ ಉಪ ವಿಭಾಗ, ರಾಮನಗರ ಜಿಲ್ಲೆ ಅಥವಾ ಆಯಾಯ ತಾಲೂಕಿನ ಕಾರ್ಮಿಕ ನಿರೀಕ್ಷಕರು ಕಚೇರಿಗೆ ಮಾಹಿತಿ ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Silk_City
ಪಿ ಒ ಪಿ ಗಣೇಶ ನಿಷೇಧ
ರಾಮನಗರ: ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ, ಪ್ಲಾಸ್ಟರ್‌ಆಫ್ ಪ್ಯಾರೀಸ್ ನಿಂದ (ಪಿಒಪಿ) ತಯಾರಿಸಿದ ಗಣೇಶ ವಿಗ್ರಹಗಳ ಉತ್ಪಾದನೆ, ಮಾರಾಟ ಮತ್ತು ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಗಣೇಶ ವಿಗ್ರಹಗಳನ್ನು ಸ್ಥಾಪಿಸಲು ಇಚ್ಛಿಸುವ ಸಮಿತಿಯವರು ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದ (ಸ್ಥಳೀಯ ಸಂಸ್ಥೆ, ಪೋಲೀಸ್, ಬೆಸ್ಕಾಂ) ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರಸಭೆಯಿಂದ ಗಣೇಶ ವಿಸರ್ಜನೆಗಾಗಿ ರಂಗರಾಯರದೊಡ್ಡಿ ಕೆರೆ ಅವರಣದ ಸಿರಿ ಗೌರಿ ಕಲ್ಯಾಣಿಯಲ್ಲಿ ಸ್ಥಳ ನಿಗದಿಪಡಿಸಿದೆ. ಟ್ರಾಕ್ಟರ್‌ನಲ್ಲಿ ನೀರಿನ ಟ್ಯಾಂಕರ್‌ ಆಳವಡಿಸಿ ಗೌರಿ ಗಣೇಶ ಮೂರ್ತಿಗಳನ್ನು ಮನೆಗಳಿಂದಲೇ ವಿನರ್ಜಿಸುವ ವ್ಯವಸ್ಥೆ ನಗರಸಭೆಯಿಂದ ಮಾಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ರಾಮನಗರ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Silk_City
ಅರ್ಜಿ ಆಹ್ವಾನ
ರಾಮನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಚನ್ನಪಟ್ಟಣ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಆಹ್ವಾನಿಸಲಾಗಿದೆ. ಅಂಗನವಾಡಿ ಸಹಾಯಕಿಯರ ಹುದ್ದೆಗೆ ಸೆ.30ರ ಸಂಜೆ 5.30ರೊಳಗೆ https:// karnemakaone.kar.nic.in/abcd/ ವೆಬ್ಸೈಟಿನಿಂದ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳ ಕಚೇರಿ, ನಂ.4823 ಆ1, ಅಪ್ಪಾಜಿ ಕಾಂಪ್ಲೆಕ್ಸ್, ಚಾನಲ್ ರಸ್ತೆ, (3ನೇ ಅಡ್ಡರಸ್ತೆ) ವಿವೇಕಾನಂದ ನಗರ, ಚನ್ನಪಟ್ಟಣ ಟೌನ್‌, ರಾಮನಗರ ಜಿಲ್ಲೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.