ರಾಗಿ ಮಾಲ್ಟ್ ಪ್ರಾತ್ಯಕ್ಷಿಕೆ
ಮಾಗಡಿ: ಕೃಷಿ ವಿವಿ ಅಂತಿಮ ವರ್ಷದ ವಿದ್ಯಾರ್ಥಿಗಳುತಾಲೂಕಿನ ಹುಚ್ಚುಹನು ಮೇಗೌಡನಪಾಳ್ಯ ಗ್ರಾಮದಲ್ಲಿರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಕಾರ್ಯ ಕ್ರಮ ಹಾಗೂ ರಾಗಿ ಮಾಲ್ಟ್ ಮಾಡುವ ವಿಧಾನ ಪ್ರಾತ್ಯ ಕ್ಷಿಕೆ ನೀಡಿದರು. ಕಾರ್ಯ ಕ್ರಮದಲ್ಲಿ ಆಹಾರದಮೌಲ್ಯವರ್ಧನೆ, ಸಮತೋಲಿತ ಆಹಾರ ಹಾಗೂ ಆರೋ ಗ್ಯಕರವಾದ ಆಹಾರ ಸ್ವೀಕರಿಸುವ ಬಗ್ಗೆ ಕೃಷಿ ವಿವಿ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ರೂಪ ಬಿ. ಪಾಟೀಲ ಪ್ರಾತ್ಯಕ್ಷಿಕೆ ನೀಡಿದರು. ಮಾಲ್ಟ್ ಮಾಡುವ ವಿಧಾನ ಮಹಿಳೆ ಯರಿಗೆ ತೋರಿಸಿಕೊಡಲಾ ಯಿತು. ಮಹಿಳೆಯರು ರಾಗಿ ಮಾಲ್ಟ್ ಸವಿದರು. ಕೃಷಿ ವಿಸ್ತರಣೆ ಪ್ರಾಧ್ಯಾಪಕಿ ಡಾ. ಮಂಜುಳಾ, ಅರಣ್ಯ ಮತ್ತು ಪರಿಸರ ವಿಜ್ಞಾನದ ಡಾ.ರಿಂಕುವರ್ಮ, ಡಾ. ಅನಿತಾ, ಶಿವರಾಮಯ್ಯ, ಜಯಲಕ್ಷ್ಮೀ, ಗಂಗಮ್ಮ, ಶಾರದಮ್ಮ, ಇದ್ದರು.